Friday, 19th August 2022

ಟ್ರಾವೆಲರ್ ಬಸ್ ಪಲ್ಟಿ: ನಾಲ್ವರ ಸಾವು, 48 ಮಂದಿಗೆ ಗಾಯ

ಕಾಬೂಲ್: ಅಫ್ಘಾನಿಸ್ತಾನದ ಝಬುಲ್ ಪ್ರಾಂತ್ಯದಲ್ಲಿ ಟ್ರಾವೆಲರ್ ಬಸ್ ಪಲ್ಟಿಯಾದ ಪರಿಣಾಮ ನಾಲ್ವರು ಮೃತಪಟ್ಟು 48 ಮಂದಿ ಗಾಯಗೊಂಡಿದ್ದಾರೆ. ಶಹರ್-ಎ-ಸಫಾ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು  ಮೃತಪಟ್ಟಿದ್ದಾರೆ. 48 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಂತೀಯ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಹಕಿಮಿ ತಿಳಿಸಿದ್ದಾರೆ. ಅಜಾಗರೂಕ ಚಾಲನೆ ಮತ್ತು ದಟ್ಟಣೆಯ ರಸ್ತೆಗಳಿಂದಾಗಿ ಅಫ್ಘಾನಿಸ್ತಾನದಲ್ಲಿ ಆಗಾಗ್ಗೆ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮುಂದೆ ಓದಿ

ಫೈಜಾಬಾದ್‌ನಲ್ಲಿ ಭೂಕಂಪ: 4.3 ತೀವ್ರತೆ

ಕಾಬೂಲ್ : ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ಭೂಕಂಪ ಸಂಭವಿಸಿದ್ದು, 4.3 ತೀವ್ರತೆ ದಾಖಲಾಗಿದೆ ಎಂದು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ. ಕಳೆದ ಬುಧವಾರ ಕೂಡ ಪೂರ್ವ...

ಮುಂದೆ ಓದಿ

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 130 ಜನರ ಸಾವು

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಬುಧವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ರಷ್ಟು ತೀವ್ರತೆ ದಾಖಲಾಗಿದೆ. ಆಗ್ನೇಯ ಅಫ್ಘಾನಿಸ್ತಾನದ ಖೋಸ್ಟ್ ನಗರದಿಂದ 51 ಕಿ.ಮೀ...

ಮುಂದೆ ಓದಿ

ಕಾಬೂಲ್​: ಗುರುದ್ವಾರದಲ್ಲಿ ಸರಣಿ ಸ್ಫೋಟ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಗುರುದ್ವಾರ ದಲ್ಲಿ ಶನಿವಾರ ಸರಣಿ ಸ್ಫೋಟ ಸಂಭವಿಸಿದ್ದು, ಘಟನೆಯನ್ನು ಭಾರತ ತೀವ್ರ ಖಂಡಿಸಿದೆ. ಸರಣಿ ದಾಳಿ ಜತೆಗೆ ಗುಂಡಿನ ದಾಳಿ ನಡೆಸಲಾಗಿದ್ದು,...

ಮುಂದೆ ಓದಿ

ಮಹಿಳೆಯರು ಸಾರ್ವಜನಿಕವಾಗಿ ಬುರ್ಖಾ ಧರಿಸಲಿ

ಕಾಬೂಲ್: ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂದ್ಜಾದಾ ಶನಿವಾರ ಅಫ್ಘಾನ್ ಮಹಿಳೆಯರು ಸಾರ್ವಜನಿಕವಾಗಿ ಬುರ್ಖಾ ಧರಿಸುವಂತೆ ಆದೇಶಿಸಿದ್ದಾರೆ. ಸಾಂಪ್ರದಾಯಿಕ ಮತ್ತು ಗೌರವಯುತವಾದ ಕಾರಣ, ಚಾಡೋರಿ (ತಲೆಯಿಂದ ಕಾಲ್ಬೆ ರಳು...

ಮುಂದೆ ಓದಿ

ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಚಾಲನಾ ಪರವಾನಗಿ ನಿಷೇಧ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಸರ್ಕಾರ ಮಹಿಳೆಯರಿಗೆ ಚಾಲನಾ ಪರವಾನಗಿಯನ್ನೂ ನಿಷೇಧಿಸಿದೆ. ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸ ಲಾಗಿದೆ. ಕಾಬೂಲ್...

ಮುಂದೆ ಓದಿ

ಅಫ್ಘಾನಿಸ್ತಾನ: ಎರಡು ಸ್ಫೋಟ, ಒಂಬತ್ತು ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಎರಡು ಸ್ಫೋಟಗಳಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಬಾಲ್ಖ್ ಪ್ರಾಂತ್ಯದ ಮಜರ್-ಎ-ಷರೀಫ್ ಪ್ರದೇಶದಲ್ಲಿ ಸ್ಫೋಟಗಳು ವರದಿ ಯಾಗಿದ್ದರಿಂದ ಎರಡೂ ಸ್ಫೋಟಗಳು...

ಮುಂದೆ ಓದಿ

ಮಸೀದಿಯಲ್ಲಿ ಪ್ರಬಲ ಸ್ಫೋಟ: ಹತ್ತು ಮಂದಿ ಸಾವು

ಕಾಬೂಲ್‌: ಅಫ್ಘಾನಿಸ್ತಾನದ ಉತ್ತರ ನಗರ ಮಜರ್-ಇ-ಶರೀಫ್‌ನ ಶಿಯಾ ಮಸೀದಿಯಲ್ಲಿ ಗುರುವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 10 ಭಕ್ತರು ಮೃತಪಟ್ಟಿದ್ದಾರೆ. ಮೃತರು ಮತ್ತು ಗಾಯಗೊಂಡವರನ್ನ ಆಂಬ್ಯುಲೆನ್ಸ್ ಮತ್ತು ಖಾಸಗಿ...

ಮುಂದೆ ಓದಿ

ಶಿಕ್ಷಣ ಸಂಸ್ಥೆಗಳ ಮೇಲೆ ಸರಣಿ ಬಾಂಬ್ ದಾಳಿ: 7 ವಿದ್ಯಾರ್ಥಿಗಳ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಸರಣಿ ಬಾಂಬ್ ದಾಳಿ ನಡೆಸಿದ ಪರಿಣಾಮ ಸುಮಾರು 7 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಸುನ್ನಿ ಸಮುದಾಯದ ಉಗ್ರರು ಹೈಸ್ಕೂಲ್ ಮೇಲೆ ಬಾಂಬ್...

ಮುಂದೆ ಓದಿ

ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 18 ಮಂದಿಗೆ ಗಾಯ

ಕಾಬೂಲ್: ವಾರ್ಡಕ್ ಪ್ರಾಂತ್ಯದ ಹೆದ್ದಾರಿಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 18 ಜನರು ಗಾಯಗೊಂಡಿದ್ದಾರೆ. ನಂಗರ್‌ಹಾರ್ ಪ್ರಾಂತ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಎಂಟು ಜನರು ಮೃತ ಪಟ್ಟು,...

ಮುಂದೆ ಓದಿ