ಅಸ್ತಾನಾ: ಕುಸ್ತಿಪಟು ಅಮನ್ ಸೆಹ್ರಾವತ್ ಕಜಕಿಸ್ತಾನದ ಅಸ್ತಾನಾದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ 2023 ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡರು. ಸೆಹ್ರಾವತ್ 57 ಕೆಜಿ ವಿಭಾಗದಲ್ಲಿ ಕಿರ್ಗಿಸ್ತಾನ್ನ ಅಲ್ಮಾಜ್ ಸ್ಮಾನ್ಬೆಕೊವ್ ಅವರನ್ನು ಫೈನಲ್ ಹಣಾಹಣಿಯಲ್ಲಿ ಸೋಲಿಸಿ ಚಿನ್ನದ ಪದಕ ಪಡೆದರು. ಕಳೆದ ವರ್ಷ ಸ್ಪೇನ್ನಲ್ಲಿ ನಡೆದ U-23 ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸೆಹ್ರಾವತ್, ಸ್ಪರ್ಧೆಯ ಅಂತಿಮ ದಿನದಂದು ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ […]