ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ 6 ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉಳಿದ 7 ಪಂದ್ಯಗಳನ್ನು ಸೆಮಿಫೈನಲ್ ರೀತಿ ಭಾವಿಸಿ ಆಡಬೇಕಿದೆ ಎಂದು ಕೋಚ್ ಆಯಂಡಿ ಫ್ಲವರ್ ಹೇಳಿದ್ದಾರೆ. ಹೈದರಾಬಾದ್ ವಿರುದ್ಧ 25 ರನ್‌ಗಳ ವೀರೋಚಿತ ಸೋಲು ಕಂಡ ಆರ್‌ಸಿಬಿ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣಗೊಂಡಿದೆ. ‘ಇದು ಖಂಡಿತಾ ನೌಕೌಟ್ ಸಮಯ. ಪ್ರತೀ ಪಂದ್ಯವೂ ಈಗ ನಮಗೆ ಸೆಮಿಫೈನಲ್ ಇದ್ದಂತೆ ಎಂದು ಅವರು ಹೇಳಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳ […]