ಮುಂಬೈ: ಚಿಪ್ ಡಿಸೈನರ್, ಇಂಟೆಲ್ ಇಂಡಿಯಾ ಮಾಜಿ ಮುಖ್ಯಸ್ಥ ಅವತಾರ್ ಸೈನಿ ನವೀ ಮುಂಬೈನಲ್ಲಿ ಸೈಕ್ಲಿಂಗ್ ಮಾಡುವಾಗ ಹಿಂಬದಿಯಿಂದ ವೇಗವಾಗಿ ಬಂದ ಕ್ಯಾಬ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಮುಂಬೈನ ಚೆಂಬೂರ್ ನಿವಾಸಿ 68 ವರ್ಷದ ಸೈನಿ ಅವರು ನವಿ ಮುಂಬೈನ ನೆರೂಲ್ ಜಂಕ್ಷನ್ ಮತ್ತು ಎನ್‌ಆರ್‌ಐ-ಸೀವುಡ್ಸ್ ಎಸ್ಟೇಟ್ ಸಿಗ್ನಲ್‌ನಲ್ಲಿ ಅಪಘಾತಕ್ಕೀಡಾಗಿದ್ದಾರೆ. ಅವರು ಸೈಕ್ಲಿಂಗ್ ಉತ್ಸಾಹಿಗಳ ಗುಂಪಿನೊಂದಿಗೆ ಸೈಕ್ಲಿಂಗ್ ಮಾಡುತ್ತಿದ್ದಾಗ, ವೇಗವಾಗಿ ಬಂದ ಕ್ಯಾಬ್ ಅವರಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಅವರನ್ನು ಡಿವೈ ಪಾಟೀಲ್ ಆಸ್ಪತ್ರೆಗೆ ಕರೆದೊಯ್ದರೂ ದಾಖಲಿಸುವಷ್ಟರಲ್ಲಿ […]