ಬೆಂಗಳೂರು: ನಗರದ ಶ್ರೀಮಂತ ದೇವಾಲಯ ದಕ್ಷಿಣ ಬೆಂಗಳೂರಿನ ಬನಶಂಕರಿ ದೇವಸ್ಥಾನ ಭವ್ಯವಾದ ‘ಬನದ ಹುಣ್ಣಿಮೆ’ ಉತ್ಸವ ಆಚರಿಸಲು ಸಿದ್ಧವಾಗಿದೆ. ಸುಮಾರು 107 ವರ್ಷಗಳ ನಂತರ ಹೊಚ್ಚಹೊಸ ರಥವನ್ನು ಕೂಡಾ ಸ್ವಾಗತಿಸಲು ದೇವಾಲಯವು ಸಜ್ಜಾಗಿದೆ. 108ನೇ ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ರೂಪು ಗೊಂಡಿರುವ ಬನಶಂಕರಿ ದೇವಸ್ಥಾನವು ನೂತನ ಮರದ ರಥವನ್ನು ಅನಾವರಣಗೊಳಿಸಲಿದೆ. ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ ಅಧಿಕಾರಿಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ಗುರುವಾರ ಮಹಾರಥೋತ್ಸವದ ಸಮಯದಲ್ಲಿ ರಥವು ದೇವಾಲಯದ ಸುತ್ತಲೂ […]