Thursday, 2nd February 2023

ಬೆಂಗಳೂರು ಗ್ರಾಮಾಂತರ: ಬೆಂಕಿ ಕೆನ್ನಾಲಿಗೆಗೆ ಹೋಟೆಲ್​ ಸುಟ್ಟು ಭಸ್ಮ

ಬೆಂಗಳೂರು: ದೇವನಹಳ್ಳಿ ಹೊರವಲಯದ(ಬೆಂಗಳೂರು ಗ್ರಾಮಾಂತರ ಜಿಲ್ಲೆ) ಹೆದ್ದಾರಿ ಬದಿಯ ಹೋಟೆಲ್​ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ, ಕೆನ್ನಾಲಿಗೆಗೆ ಹೋಟೆಲ್​ ಸುಟ್ಟು ಭಸ್ಮವಾಗಿದೆ. ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಗುರುವಾರ ಹೋಟೆಲ್​ನಲ್ಲಿ ಆಕಸ್ಮಿಕ ಬೆಂಕಿ ಬಿದ್ದು, ಇಡೀ ಹೋಟೆಲ್​ ಧಗಧಗಿಸಿ ಹೊತ್ತಿ ಉರಿಯಿತು. ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿ ಸ್ಥಳೀಯರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಅದೃಷ್ಟವಶಾತ್ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಹಕರು ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ.

ಮುಂದೆ ಓದಿ

error: Content is protected !!