ಬೆಂಗಳೂರು: ಮಹಾರಾಜ ಟ್ರೋಫಿಯು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಗುರುವಾರ ಮೈಸೂರು ವಾರಿಯರ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳ ನಡುವಿನ ಎರಡನೇ ಕ್ವಾಲಿಫಯರ್ ಪಂದ್ಯ ಹಾಗೂ ಆ.27ರಂದು ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಎರಡನೇ ಕ್ವಾಲಿಫಯರ್ ಗೆಲ್ಲುವ ತಂಡದ ನಡುವೆ ಫೈನಲ್ ಪಂದ್ಯ ಜರುಗಲಿದೆ. ಆ.7ರಂದು ಆರಂಭವಾಗಿದ್ದ ಮಹಾರಾಜ ಟ್ರೋಫಿ ಫೈನಲ್ ಪಂದ್ಯದ ಮೂಲಕ ಅಂತ್ಯಗೊಳ್ಳಲಿದ್ದು, ಇದಕ್ಕೂ ಮುನ್ನ ಮಹಿಳಾ ಮಹರಾಜ ಟ್ರೋಫಿ ಟಿ ಟ್ವೆಂಟಿ ಲೀಗ್ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ತೀರ್ಮಾನಿಸಿದೆ. ಹುಬ್ಬಳ್ಳಿ ಟೈಗರ್ಸ್ […]