ಕೋಲಾರ: ಮಾಜಿ ಸಚಿವ ವರ್ತೂರ್ ಪ್ರಕಾಶ್ ಸೇರಿದಂತೆ ಬಿರಿಯಾನಿ ಸವಿದ 105 ಮಂದಿ ಕಾರ್ಯಕರ್ತರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಬಿರಿಯಾನಿ ಊಟ ಹಾಕಿಸಿ, ಮಾಜಿ ಸಚಿವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಲಾರ ನಗರದ ಎ.ಎಪ್ ಕಲ್ಯಾಣ ಮಂಟಪದಲ್ಲಿ ಸಭೆ ಮಾಡಿ ನೂರಾರು ಕಾರ್ಯಕರ್ತರಿಗೆ ಬಿರಿಯಾನಿ ಊಟ ಹಾಕಿಸಿದ್ದರು. ಕರೋನಾ ನಿಯಮ ಉಲ್ಲಂಘನೆ ಮಾಡಿ ಊಟ ಹಾಕಿಸಿದ್ದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ‘ನಮ್ಮ ಕಾಂಗ್ರೆಸ್’ನ ರಾಜ್ಯಾಧ್ಯಕ್ಷ ಬೆಗ್ಲಿ ಪ್ರಕಾಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೂಲೂರು ಅಂಜಿನಪ್ಪ, ಜಿಲ್ಲಾ […]