ಬೀದರ್ : ಬೀದರ್ ಕ್ಷೇತ್ರದ ಮಾಜಿ ಶಾಸಕ ಜುಲ್ಫೇಕರ್ ಹಾಸ್ಮಿ (57) ಅವರು ಮಂಗಳವಾರ ನಿಧನರಾಗಿದ್ದಾರೆ. ಮೂತ್ರಪಿಂಡ ವೈಫಲ್ಯದಿಂದ ಹೈದರಾಬಾದ್ನ ಖಾಸಗಿ ಆಸ್ಪತ್ತೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಡಯಾಲಿಸಿಸ್’ಗೆ ಒಳಗಾಗಿದ್ದು, ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಹೈದರಾಬಾದ್ನ ಆಸರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಜುಲ್ಫೇಕರ್ ಹಾಸ್ಮಿ ಅವರ ಅಂತ್ಯ ಕ್ರಿಯೆ ತಾಲೂಕಿನ ಅಷ್ಟೂರಿನ ಅವರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು […]