ಕಾಬೂಲ್: ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂದ್ಜಾದಾ ಶನಿವಾರ ಅಫ್ಘಾನ್ ಮಹಿಳೆಯರು ಸಾರ್ವಜನಿಕವಾಗಿ ಬುರ್ಖಾ ಧರಿಸುವಂತೆ ಆದೇಶಿಸಿದ್ದಾರೆ. ಸಾಂಪ್ರದಾಯಿಕ ಮತ್ತು ಗೌರವಯುತವಾದ ಕಾರಣ, ಚಾಡೋರಿ (ತಲೆಯಿಂದ ಕಾಲ್ಬೆ ರಳು ಬುರ್ಖಾ) ಧರಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಕಠಿಣ ಇಸ್ಲಾಮಿಸ್ಟ್‌ಗಳು ಅಧಿಕಾರವನ್ನ ವಶಪಡಿಸಿಕೊಂಡ ನಂತ್ರ ಮಹಿಳೆಯರ ಮೇಲೆ ಹೇರಲಾದ ಕಠಿಣ ನಿಯಂತ್ರಣಗಳನ್ನ ಮತ್ತೊಮ್ಮೆ ಎತ್ತಿ ತೋರಿಸುತ್ತದೆ. ಹೆಚ್ಚು ವಯಸ್ಸಾಗದ ಮಹಿಳೆಯರು ಶರಿಯಾ ನಿರ್ದೇಶನಗಳ ಪ್ರಕಾರ, ಮಹರಾಮ್ ಅಲ್ಲದ ಪುರುಷರನ್ನ (ವಯಸ್ಕ ನಿಕಟ ಪುರುಷ ಸಂಬಂಧಿಕರು) ಭೇಟಿಯಾಗುವಾಗ […]