ಚಿಕ್ಕಮಗಳೂರು: ಬೆಳೆಗೆ ನ್ಯಾಯಯುತ ಬೆಲೆ ಸಿಗದ ಕಾರಣ ರೈತರೊಬ್ಬರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ಟ್ರಾಕ್ಟರ್ ಮೂಲಕ ಬೆಳೆ ನಾಶ ಮಾಡಿದ್ದಾರೆ. ಹಿರೇಗೌಜ ಗ್ರಾಮದ ರೈತ 4 ತಿಂಗಳ ಹಿಂದೆ ಒಂದೂವರೆ ಎಕರೆ ಜಮೀನಿನಲ್ಲಿ 75 ಸಾವಿರ ರೂಪಾಯಿ ವೆಚ್ಚ ಮಾಡಿ ಎಲೆಕೋಸು ಬೆಳೆದಿದ್ದರು. ಉತ್ತಮ ಬೆಳೆ ಬಂದಿದ್ದು, ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷಿತ ಬೆಲೆ ಸಿಕ್ಕಿಲ್ಲ. ಬೆಳೆ ಉತ್ತಮವಾಗಿದ್ದರೂ ಬೆಲೆ ಕುಸಿತದಿಂದ ಬೇಸತ್ತು ಬೆಳೆಯನ್ನು ಟ್ರಾಕ್ಟ್ರರ್ ಹೊಡೆದು ನಾಶಪಡಿಸಿ ಬೆಲೆ ಏರಿಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯವರ್ತಿಗಳು […]