Saturday, 23rd November 2024

ಸಿಂಪಲ್ ಮ್ಯಾರೇಜ್ ಆದ ಬಿಗ್ ಬಾಸ್’ ಸ್ಪರ್ಧಿ ಚೈತ್ರಾ ಕೊಟೂರ್

ಬೆಂಗಳೂರು: ‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ಚೈತ್ರಾ ಕೊಟೂರ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಸ್ನೇಹಿತ, ಉದ್ಯಮಿ ನಾಗಾರ್ಜುನ ಅವರೊಂದಿಗೆ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಾಲಯದಲ್ಲಿ ಸರಳವಾಗಿ ಮದುವೆಯಾಗಿ ದ್ದಾರೆ. ಕಳೆದ ವರ್ಷ ಪರಿಚಿತರಾಗಿದ್ದರು. ಸಿಂಪಲ್ ಮ್ಯಾರೇಜ್ ನನ್ನ ಉದ್ದೇಶವಾಗಿತ್ತು. ಇಬ್ಬರು ಸೇರಿ ನಿರ್ಧಾರ ತೆಗೆದು ಕೊಂಡೆವು ಎಂದು ಚೈತ್ರ ಕೊಟೂರ್ ತಿಳಿಸಿದ್ದಾರೆ. ಬರಹಗಾರ್ತಿ, ರಂಗಭೂಮಿ ಕಲಾವಿದೆ, ಸಿನಿಮಾ ನಟಿಯಾಗಿಯೂ ಚೈತ್ರ ಕೊಟೂರು ಗುರುತಿಸಿಕೊಂಡಿದ್ದಾರೆ.    

ಮುಂದೆ ಓದಿ