ಮೆಕ್ಸಿಕೊ ಸಿಟಿ: ಮೆಕ್ಸಿಕೊದ ಅಧ್ಯಕ್ಷೀಯ ಅಭ್ಯರ್ಥಿ ಕ್ಲೌಡಿಯಾ ಶೆನ್ಬಾಮ್ ಅವರು ಭಾನುವಾರ ನಡೆದ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ. “ಗಣರಾಜ್ಯದ 200 ವರ್ಷಗಳಲ್ಲಿ ಮೊದಲ ಬಾರಿಗೆ, ನಾನು ಮೆಕ್ಸಿಕೊದ ಮೊದಲ ಮಹಿಳಾ ಅಧ್ಯಕ್ಷನಾಗುತ್ತೇನೆ” ಎಂದು ಶೆನ್ಬಾಮ್ ಹೇಳಿದ್ದಾರೆ. 61 ವರ್ಷದ ಹವಾಮಾನ ವಿಜ್ಞಾನಿ ಮತ್ತು ಮಾಜಿ ನೀತಿ ನಿರೂಪಕ ಶೇ.58.3ರಿಂದ ಶೇ.60.7ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಅಂಕಿಅಂಶ ಮಾದರಿ ತಿಳಿಸಿದೆ. ವಿಪಕ್ಷ ಅಭ್ಯರ್ಥಿ ಕ್ಸೊಚಿಟ್ಲ್ ಗಾಲ್ವೆಜ್ ಶೇ.26.6ರಿಂದ ಶೇ.28.6ರಷ್ಟು ಮತಗಳನ್ನು ಪಡೆದರೆ, ಜಾರ್ಜ್ ಅಲ್ವಾರೆಜ್ ಮೈನೆಜ್ ಶೇ.9.9ರಿಂದ ಶೇ.10.8ರಷ್ಟು ಮತಗಳನ್ನು […]