ಸಿಡ್ನಿ: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಕಚೇರಿ ಆರಂಭಿಸುವುದಾಗಿ ಆಸ್ಟ್ರೇ ಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ. ಇದರಿಂದ ದೇಶದ ವ್ಯವಹಾರಗಳನ್ನು ಭಾರತದ ಪ್ರವರ್ಧಮಾನಕ್ಕೆ ಬರುತ್ತಿರುವ ಡಿಜಿಟಲ್ ಮತ್ತು ನಾವೀನ್ಯತೆಯ ವ್ಯವಸ್ಥೆಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಬೆಂಗಳೂರಲ್ಲಿ ಆಸ್ಟ್ರೇಲಿಯಾ ಹೊಸ ಕಾನ್ಸುಲೇಟ್ ಜನರಲ್ ತೆರೆಯಲು ಮುಂದಾಗಿದೆ ಎಂದು ಹೇಳಲು ನನಗೆ ಖುಷಿಯಾ ಗುತ್ತಿದೆ. ಉಭಯ ದೇಶಗಳ ನಡುವೆ ಸಂಪರ್ಕಕ್ಕೆ, ವ್ಯವಹಾರಕ್ಕೆ ಈ ಕಚೇರಿಯಿಂದ ನೆರವು ದೊರೆಯಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ […]