Saturday, 14th December 2024

28 ವಾರಗಳ ಗರ್ಭಧಾರಣೆ: ಗರ್ಭಪಾತಕ್ಕೆ ನೋ ಎಂದ ದೆಹಲಿ ಹೈಕೋರ್ಟ್

ನವದೆಹಲಿ: ಗರ್ಭಧಾರಣೆ(28 ವಾರಗಳ) ಯನ್ನು ಕೊನೆಗೊಳಿಸುವಂತೆ ಕೋರಿ ಅವಿವಾಹಿತ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ಈ ವಿಷಯದಲ್ಲಿ ಹೈಕೋರ್ಟ್ ಫೆಬ್ರವರಿ 1 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ವಿಚಾರಣೆಯ ಸಮಯದಲ್ಲಿ, ಆಗ 28 ವಾರಗಳ ಗರ್ಭಿಣಿಯಾಗಿದ್ದ ಮಹಿಳೆಯ ಪರ ವಕೀಲರು ತಮ್ಮ ಕಕ್ಷಿದಾರರಿಗೆ 20 ವರ್ಷ ವಯಸ್ಸಾಗಿದೆ ಮತ್ತು ಇತ್ತೀಚೆಗೆ ಆಕೆಯ ಗರ್ಭಧಾರಣೆಯ ಬಗ್ಗೆ ತಿಳಿದಿದೆ ಎಂದು ವಾದಿಸಿದ್ದರು. […]

ಮುಂದೆ ಓದಿ