ಕೋಪೆನ್‌ಹೇಗನ್: ಡೆನ್ಮಾರ್ಕ್‌ನ ರಾಣಿ ಮಾರ್ಗರೇತ್ ಅಧಿಕಾರ ತ್ಯಜಿಸಿದ್ದು, ಅವರ ಪುತ್ರ ಫೆಡ್ರಿಕ್ 10ನೇ ರಾಜನಾಗಿ ಅಧಿಕಾರ ಗ್ರಹಣ ಮಾಡಿದರು. ರಾಜನಾಗಿ ಫೆಡ್ರಿಕ್ ಅಧಿಕಾರ ಗ್ರಹಣ ಮಾಡುವ ಗಳಿಗೆಗೆ ಲಕ್ಷಾಂತರ ಜನರು ಸಾಕ್ಷಿಯಾದರು. ಇದಕ್ಕೂ ಮೊದಲು ರಾಣಿ ಮಾರ್ಗರೇತ್ ಕೋಪನ್‌ಹೇಗನ್‌ನ ಪ್ರಮುಖ ರಸ್ತೆಗಳಲ್ಲಿ ಕುದುರೆ ಸಾರೋಟಿನಲ್ಲಿ ಸಾಗಿ ಅರಮನೆ ತಲುಪಿದರು. ರಸ್ತೆಯ ಇಕ್ಕೆಲೆ ಗಳಲ್ಲಿ ನಿಂತಿದ್ದ ಅಸಂಖ್ಯಾತ ನಾಗರಿಕರು ಕೈಬೀಸಿ ಈ ಸಂದರ್ಭಕ್ಕೆ ಸಾಕ್ಷಿಯಾದರು. ಕ್ರಿಸ್ತಿಯಾನ್ಸ್‌ಬರ್ಗ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ 83 ವರ್ಷದ ರಾಣಿ ಮಾರ್ಗರೇತ್, ಅಧಿಕಾರ ತ್ಯಜಿಸುವ […]