ನವದೆಹಲಿ: 2022ರ ಜನವರಿ ಒಂದರವರೆಗೆ ದಿಲ್ಲಿಯಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿ ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ ಆದೇಶ ಹೊರಡಿಸಿದೆ. ಈ ನಿಷೇಧ ಸಂಪೂರ್ಣವಾಗಿದ್ದು, ಹಸಿರು ಪಟಾಕಿಗಳಿಗೆ ಕೂಡಾ ಅವಕಾಶವಿಲ್ಲ ಎಂದು ಡಿಪಿಸಿಸಿ ಸ್ಪಷ್ಟಪಡಿಸಿದೆ. ದಿಲ್ಲಿಯಲ್ಲಿ ಅತ್ಯಧಿಕವಾಗಿರುವ ವಾಯುಮಾಲಿನ್ಯ ವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಬಂಧಿಸುವ ಅಗತ್ಯವಿದೆ. ಜತೆಗೆ ಕೋವಿಡ್-19ನ ಮತ್ತೊಂದು ಅಲೆ ತಡೆಯುವ ದೃಷ್ಟಿಯಿಂದ ಸಂಪೂರ್ಣ ನಿಷೇಧಕ್ಕೆ ಆದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ತಜ್ಞರು ಕೋವಿಡ್-19 ಪ್ರಕರಣಗಳ ಏರಿಕೆ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದು, ಪಟಾಕಿ ಸಿಡಿಸುವ ದೊಡ್ಡ […]