ಮಹಾರಾಷ್ಟ್ರ : ಎಲ್ಗಾರ್ ಪರಿಷತ್ ಪ್ರಕರಣ(2018) ದಲ್ಲಿ ಆರೋಪಿಯಾಗಿದ್ದ ಹೋರಾಟಗಾರ್ತಿ ಸುಧಾ ಭಾರದ್ವಾಜ್ಗೆ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ಜಾಮೀನಿಗೆ ವಿಧಿಸಬೇಕಾದ ಷರತ್ತುಗಳನ್ನು ಡಿ.8ರಂದು ವಿಚಾರಣಾ ನ್ಯಾಯಾಲಯ ನಿರ್ಧಾರ ಮಾಡಲಿದೆ. ಎಲ್ಗಾರ್ ಪರಿಷದ್ ಪ್ರಕರಣ ಆರೋಪಿಗಳಾದ ಸುಧಾ ಭಾರದ್ವಾಜ್ ಮತ್ತು 8 ಮಂದಿ ಡಿಫಾಲ್ಟ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸುಧಾ ಭಾರದ್ವಾಜ್ಗೆ ಮಾತ್ರ ಜಾಮೀನು ನೀಡಲಾಗಿದೆ. ಆಗಸ್ಟ್ 2018ರಿಂದ ಸುಧಾ ಜೈಲಿನಲ್ಲಿದ್ದು ಅವರನ್ನು ದೆಹಲಿ ಯಲ್ಲಿ ಬಂಧಿಸಿ ಮುಂಬೈಗೆ ಕರೆದೊಯ್ಯಲಾಗಿತ್ತು. ಪ್ರಕರಣದಲ್ಲಿ ಆಂಧ್ರದ ಕ್ರಾಂತಿಕಾರಿ ಕವಿ […]