ನವದೆಹಲಿ: ಸುಳ್ಳು ದಾಖಲೆಗಳನ್ನು ನೀಡಿ ಸಿಮ್ ಕಾರ್ಡ್ ಪಡೆದವರಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ನೀಡಿದ್ದು, ನಕಲಿ ದಾಖಲೆಗಳೊಂದಿಗೆ ಪಡೆದ 55 ಲಕ್ಷ ಫೋನ್ ಸಂಖ್ಯೆಗಳನ್ನು ಕೇಂದ್ರವು ರದ್ದುಗೊಳಿಸಿದೆ. ಕೇಂದ್ರವು ಕೆಲವು ಸಮಯದಿಂದ ಸಂಚಾರ್ ಸಾಥಿ ಎಂಬ ದೇಶಾದ್ಯಂತ ಮೊಬೈಲ್ ಸಂಖ್ಯೆ ಪರಿಶೀಲನಾ ಕಾರ್ಯಕ್ರಮವನ್ನು ನಡೆಸುತ್ತಿದೆ. ಕಾನೂನುಬಾಹಿರ ವಿಧಾನಗಳ ಮೂಲಕ ಪಡೆದ ಸಿಮ್ ಕಾರ್ಡ್ ಗಳ ಮೂಲಕ ಸೈಬರ್ ಅಪರಾಧಗಳು ಮತ್ತು ಇತರ ಅಪರಾಧಗಳು ನಡೆಯದಂತೆ ತಡೆಯುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಲಕ್ಷಾಂತರ ಸಿಮ್ ಕಾರ್ಡ್ ಗಳು […]