ನವದೆಹಲಿ: ಮಹಿಳಾ U-17 ಫುಟ್ಬಾಲ್ ತಂಡದ ತರಬೇತುದಾರ ಥಾಮಸ್ ಡೆನ್ನರ್ಬಿ ಅವರು ಅ.11ರಿಂದ ಪ್ರಾರಂಭವಾಗುವ FIFA U-17 ವಿಶ್ವಕಪ್‌ಗಾಗಿ 21 ಸದಸ್ಯರ ತಂಡವನ್ನ ಪ್ರಕಟಿಸಿದ್ದಾರೆ. ಟೂರ್ನಿಯಲ್ಲಿ ಭಾರತವು ‘ಎ’ ಗುಂಪಿನಲ್ಲಿದ್ದು, ಅಮೆರಿಕ, ಮೊರಾಕೊ ಮತ್ತು ಬ್ರೆಜಿಲ್ ತಂಡಗಳನ್ನು ಗುಂಪಿನಲ್ಲಿ ಸೇರಿಸಿಕೊಳ್ಳಲಾಗಿದೆ. ಭಾರತ ಮೊದಲ ಪಂದ್ಯವನ್ನು ಅ.11 ರಂದು ಯುಎಸ್‌ಎ ವಿರುದ್ಧ ಆಡಲಿದೆ. ನಂತರ 14 ಮತ್ತು 17 ರಂದು ಕ್ರಮವಾಗಿ ಮೊರಾಕೊ ಮತ್ತು ಬ್ರೆಜಿಲ್ ವಿರುದ್ಧ ಸೆಣಸಲಿದ್ದಾರೆ. ಭಾರತ ತಂಡದ ಎಲ್ಲಾ ಪಂದ್ಯಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ […]