ಹೈದರಾಬಾದ್: ಹೈದರಾಬಾದ್ ನಿವಾಸಿ ಗಟ್ಟಿಪಲ್ಲಿ ಶಿವಪಾಲ್ ಅವರು ಚಾಲನಾ ಪರವಾನಗಿ ಗಳಿಸಿದ ದೇಶದ ಮೊದಲ ಕುಬ್ಜ ರಾಗಿದ್ದಾರೆ. ಮೂರು ಅಡಿ ಎತ್ತರದ 42 ವರ್ಷದ ವ್ಯಕ್ತಿ, ತನ್ನ ಅಂಗ ವೈಫಲ್ಯವನ್ನು ಧಿಕ್ಕರಿಸಿ ಕರೀಂನಗರದ ತನ್ನ ಪ್ರದೇಶದಲ್ಲಿ ಪದವಿ ಪೂರ್ಣಗೊಳಿಸಿದ ಮೊದಲ ಅಂಗವಿಕಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಶಿವಪಾಲ್ 2004 ರಲ್ಲಿ ತಮ್ಮ ಅಧ್ಯಯನ ಪೂರ್ಣ ಗೊಳಿಸಿ ದರು. ನನ್ನ ಎತ್ತರದ ಕಾರಣದಿಂದ ಜನರು ನನ್ನನ್ನು ಚುಡಾಯಿಸುತ್ತಿದ್ದರು ಮತ್ತು ಇಂದು ನಾನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಾಮನಿರ್ದೇಶನಗೊಂಡಿದ್ದೇನೆ. […]