ಹೈದರಾಬಾದ್: ಟಾಲಿವುಡ್ ಹಾಗೂ ಬಾಲಿವುಡ್ ನಟಿ ಕಾಜಲ್ ಅಗರ್ವಾಲ್ ಬಣ್ಣದ ಜಗತ್ತಿನಿಂದ ದೂರ ಸರಿಯಲಿದ್ದಾರೆ ಎಂದು ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾಲಿವುಡ್ ನಲ್ಲಿ ಸಿಂಘಂ ಚಿತ್ರದಿಂದ ಖ್ಯಾತಿ ಪಡೆದ ನಟಿ ಕಾಜಲ್, ಟಾಲಿವುಡ್ ಸಿನೆಮಾದಲ್ಲಿ ತನ್ನದೇ ಆಟ ಛಾಪು ಒತ್ತಿದವರು. ಹಲವು ಖ್ಯಾತನಾಮ ನಟರುಗಳಾದ ರಾಮಚರಣ ತೇಜ, ಜೂನಿಯರ್ ಎನ್‌ಟಿಆರ್, ಪ್ರಿನ್ಸ್ ಮಹೇಶ್ ಬಾಬು ಮುಂತಾದವರ ಜತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತನ್ನ ಬಾಲ್ಯದ ಗೆಳೆಯನನ್ನು ವಿವಾಹವಾಗಿ, ಇತ್ತೀಚೆಗಷ್ಟೇ ಗಂಡುಮಗುವಿಗೆ ಜನ್ಮ ನೀಡಿರುವ ಕಾಜಲ್, ಈಗ […]