ನವದೆಹಲಿ: ಯೂರೋಪ್ ನ 7 ರಾಷ್ಟ್ರಗಳು ಕೋವಿಶೀಲ್ಡ್ ಲಸಿಕೆಯನ್ನು ‘ಗ್ರೀನ್ ಪಾಸ್ಪೋರ್ಟ್’ ಪಟ್ಟಿಗೆ ಸೇರ್ಪಡೆ ಮಾಡಿವೆ. ಈ ಮೂಲಕ ಸ್ವದೇಶಿ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದ ಅನಿವಾಸಿ ಭಾರತೀಯರಿಗೆ ಸಂತಸವಾಗಿದೆ. ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಸೇರಿಸಲು ನಿರಾಕರಿಸುತ್ತಿದ್ದ ಯೂರೋಪಿಯನ್ ರಾಷ್ಟ್ರಗಳು ತಮ್ಮ ಹಠಮಾರಿತನವನ್ನು ಪಕ್ಕಕ್ಕಿಟ್ಟು, ಕೋವಿಶೀಲ್ಡ್ ಲಸಿಕೆಯನ್ನು ‘ಗ್ರೀನ್ ಪಾಸ್ಪೋರ್ಟ್’ ಪಟ್ಟಿಗೆ ಸೇರ್ಪಡೆ ಮಾಡಿವೆ. ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್ಲ್ಯಾಂಡ್, ಐರ್ಲೆಂಡ್ ಮತ್ತು ಸ್ಪೇನ್ ಸೇರಿದಂತೆ 7 ರಾಷ್ಟ್ರಗಳು ಕೋವಿಶೀಲ್ಡ್ ಲಸಿಕೆಯನ್ನು ‘ಗ್ರೀನ್ ಪಾಸ್ಪೋರ್ಟ್’ […]