ಸಂದೀಪ್ ಶರ್ಮಾ ಮೂಟೇರಿ ‘ಹುಲಿಯ ಮೈಬಣ್ಣ ನೋಡಿ, ನರಿ ಮೈ ಸುಟಗೊಂಡಿತ್ತಂತ’ ಎಂಬ ಮಾತು ಉತ್ತರ ಕನ್ನಡದ ಜನಪದದಲ್ಲಿ ಬಹಳ ಚಾಲ್ತಿಯಲ್ಲಿದೆ. ಹುಲಿಯ ಮೈ ಬಣ್ಣಕ್ಕೆ ಮರುಳಾದ ನರಿಯೊಂದು ತಾನೂ ಅದರಂತಾಗಲು ಮೈಯನ್ನು ಸುಟ್ಟುಕೊಂಡು ಜೀವವನ್ನೇ ಬಲಿಕೊಟ್ಟ ಕಾಲ್ಪನಿಕ ಪ್ರಸಂಗವು, ಇತ್ತೀಚೆಗೆ ನಡೆದ ಕಚೇರಿಯ ವಿಚಾರ ಸಂಕಿರಣವೊಂದರಲ್ಲಿ ನನ್ನ ಸಹೋದ್ಯೋಗಿಯೊಬ್ಬರು ಹೇಳಿದ ಕಥೆಗೆ ಅನುಗುಣವಾಗಿತ್ತು. ಸಂಬಂಧಿಕರೊಬ್ಬರು ಹೊಸ ಮನೆ ಕಟ್ಟಿಸಿದ್ದು, ದಾಯಾದಿಗಳ ಮಗನೊಬ್ಬನಿಗೆ ಅಮೆರಿಕದಲ್ಲಿ ನೌಕರಿ ಸಿಕ್ಕಿದ್ದು, ಸಹೋದ್ಯೋಗಿಗೆ ಕೆಲಸದಲ್ಲಿ ಬಡ್ತಿ ಯಾಗಿದ್ದು, ಪಕ್ಕದ ಮನೆಯವರು ಕಾರು […]