ಗುಬ್ಬಿ: ಪಕ್ಷದ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಚಿರಋಣಿ ಎಂದು ಬಿಜೆಪಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ ತಿಳಿಸಿದರು. ತಾಲೂಕಿನ ಕಸಬಾ ಹೋಬಳಿ ಲಕ್ಕೇನಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ 64ನೇ ಹುಟ್ಟುಹಬ್ಬ ಆಚರಿಸಿಕೊಂಡು ಮಾತನಾಡಿ 33 ವರ್ಷಗಳ ನಿರಂತರ ರಾಜಕಾರಣ ದಲ್ಲಿ ಜನರು ನನ್ನ ಮೇಲೆ ತೋರುವ ಪ್ರೀತಿಗೆ ಚಿರಋಣಿಯಾಗಿದ್ದೇನೆ ನನಗೆ ಬಾಡಿಗೆ ಸೈಕಲ್ ಕೊಡಲು ಇಂದು ಮುಂದು ನೋಡಿದಂತಹ ಪರಿಸ್ಥಿತಿಯಿಂದ ಜನಸೇವೆ ಮಾಡುವ ಅವಕಾಶದ ವರೆಗೂ ನನ್ನ ಮೇಲೆ ಇದ್ದಂತಹ ವಿಶ್ವಾಸ ಸಹಕಾರ ಆಶೀರ್ವಾದ ಎಂದು ಮರೆಯಲಾಗದು […]