ಮುಂಬೈ : ’ಗಲ್ಲಿ ಬಾಯ್’ ರ್ಯಾಪರ್ ಧರ್ಮೇಶ್ ಪರ್ಮಾರ್(24) ಕಾರು ಅಪಘಾತದಲ್ಲಿ ಮೃತ ಪಟ್ಟಿದ್ದಾರೆನ್ನಲಾಗಿದೆ. ಸ್ಟ್ರೀಟ್ ರ್ಯಾಪರ್ ಸಮುದಾಯದಲ್ಲಿ ಪ್ರಸಿದ್ದಿ ಪಡೆದ ಧರ್ಮೇಶ್, ಎಂಸಿ ಟೋಡ್ ಫೋಡ್ ಹೆಸರಿನಲ್ಲಿ ಪ್ರಸಿದ್ಧರಾಗಿದ್ದರು. ತನ್ನ ಗುಜರಾತಿ ರ್ಯಾಪ್ʼನಿಂದಾಗಿ ಒಳ್ಳೆಯ ಹೆಸರು ಪಡೆದಿದ್ದರು. ಕೆಲವು ವರ್ಷಗಳ ಹಿಂದೆ ಹೊರಬಂದ ರಣವೀರ್ ಸಿಂಗ್ ಅವರ ಚಿತ್ರ ‘ಗಲ್ಲಿ ಬಾಯ್’ ನಲ್ಲಿ ಒಂದು ಟ್ರ್ಯಾಕ್ʼಗಾಗಿ ರ್ಯಾಪ್ ಹಾಡಿದರು. ಅಂತೆಯೇ, ಈ ಪ್ರಸಿದ್ಧ ಗಾಯಕ ಸ್ವದೇಶಿ ಬ್ಯಾಂಡ್ ಎಂಬ ಸಂಗೀತ ಬ್ಯಾಂಡ್ʼನ ಭಾಗವಾಗಿತ್ತು.