ಪ್ರಯಾಗರಾಜ್: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ 5 ಅರ್ಜಿಗಳ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಡಿ.8 ರಂದು ನಡೆಸಿದ್ದು, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಈ ಪೈಕಿ ಮೂರು ಅರ್ಜಿಗಳು 1991ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿವೆ. ಎಎಸ್‌ಐ ಸರ್ವೆ ಆದೇಶದ ವಿರುದ್ಧ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದವು. 1991ರ ಈ ಪ್ರಕರಣದಲ್ಲಿ ವಿವಾದಿತ ನಿವೇಶನವನ್ನು ಹಿಂದೂಗಳಿಗೆ ಹಸ್ತಾಂ ತರಿಸಬೇಕೆಂಬ ಬೇಡಿಕೆ ಇತ್ತು. ಇದಲ್ಲದೇ ಇಲ್ಲಿ ಪೂಜೆಗೆ ಅನುಮತಿಯನ್ನೂ ಕೋರಲಾಗಿತ್ತು. ವಾರಣಾಸಿಯ ಜಿಲ್ಲಾ ನ್ಯಾಯಾಲಯದಲ್ಲಿ 1991ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಅಲಹಾಬಾದ್ […]