ಬೆಂಗಳೂರು: ಬಹುಭಾಷಾ ನಟಿ ಹೇಮಾ ಚೌಧರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಿರಿಯ ನಟಿಗೆ ಇತ್ತೀಚೆಗೆ ಬ್ರೈನ್ ಹ್ಯಾಮರೇಜ್ ಎಂದು ವರದಿಯಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಕೆಯ ಪುತ್ರ ಐರ್ಲೆಂಡ್‌ನಲ್ಲಿದ್ದು ಆತನ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಹೇಮಾ ಚೌಧರಿ 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುಬೇಡಿಕೆಯ ಪೋಷಕ ಕಲಾವಿದೆಯಾಗಿ ಹೇಮಾ ಮಿಂಚಿದ್ದರು. ಕನ್ನಡ ಸಿನಿಮಾಗಳಲ್ಲಿ ತಮ್ಮ ನೆಗೆಟಿವ್ ಪಾತ್ರಗಳಿಂದ ಆಕೆ ಹೆಚ್ಚು ಜನಪ್ರಿಯತೆ […]