ಎಂಟು ಶತಮಾನಗಳ ಬಳಿಕ ಐಸ್ಲ್ಯಾಂಡ್ನಲ್ಲಿನ ಜ್ವಾಲಾಮುಖಿ (Iceland volcano) ಸ್ಪೋಟಿಸಿದ್ದು, ಇದರ ಅದ್ಭುತ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನೈಋತ್ಯ ಐಸ್ಲ್ಯಾಂಡ್ ನ ರೇಕ್ಜಾನೆಸ್ ಪೆನಿನ್ಸುಲಾದಲ್ಲಿ ನೆಲೆಗೊಂಡಿರುವ ಜ್ವಾಲಾಮುಖಿ ಈ ವರ್ಷ ಏಳನೇ ಬಾರಿಗೆ ಸ್ಫೋಟಿಸಿತು. 2021ರಿಂದ ಬಳಿಕ ಇಲ್ಲಿ 10ನೇ ಬಾರಿಗೆ ಜ್ವಾಲಾಮುಖಿ ಸ್ಫೋಟವಾಗಿದೆ. 800 ವರ್ಷಗಳ ಬಳಿಕ ಇಲ್ಲಿ ಸುಪ್ತಾವಸ್ಥೆಯಲ್ಲಿದ್ದ ಜ್ವಾಲಾಮುಖಿ ಮತ್ತೆ ಜೀವಂತವಾಗಿದೆ.