ನವದೆಹಲಿ: ಭಾರತೀಯ ನೌಕಾ ಸೇನೆಯಲ್ಲಿ 35 ವರ್ಷಗಳ ಕಾಲ ನಿರಂತರ ಸೇವೆಯಲ್ಲಿದ್ದು ನೌಕಾಸೇನೆಯ ಜಲಾಂತರ್ಗಾಮಿ ʼಐಎನ್ಎಸ್ ಸಿಂಧುಧ್ವಜ್ʼ ನೌಕಾಸೇನೆಗೆ ವಿದಾಯ ಹೇಳಿದೆ. ತನ್ನ 35 ವರ್ಷಗಳ ಪ್ರಯಾಣದುದ್ದಕ್ಕೂ ಸೇನೆಯ ಆತ್ಮನಿರ್ಭರ ಸಾಧಿಸುವ ಪ್ರಯತ್ನಗಳ ಧ್ವಜಧಾರಿಯಾಗಿತ್ತು. ಇದು ರಷ್ಯಾ ನಿರ್ಮಿತ ಸಿಂಧುಘೋಷ್ ವರ್ಗದ ಜಲಾಂತರ್ಗಾಮಿ ನೌಕೆಯಾಗಿದ್ದು ಅದನ್ನು ದೇಶೀಕರಣಗೊಳಿಸ ಲಾಗಿತ್ತು. ಸ್ಥಳೀಯ ಸೋನಾರ್ USHUS ಬಳಕೆ, ರುಕ್ಮಣಿಯಂತಹ ಸ್ಥಳೀಯ ಉಪಗ್ರಹ ಸಂವಹನ ವ್ಯವಸ್ಥೆಗಳು, ಸ್ಥಳೀಯ ಟಾರ್ಪಿಡೊ ಫೈರ್ ಕಂಟ್ರೋಲ್ ಸಿಸ್ಟಮ್ನ ಕಾರ್ಯಾಚರಣೆ ಮುಂತಾದವು ʼಸಿಂಧುಧ್ವಜ್ʼ ನಲ್ಲೇ ಮೊದಲು ಬಳಕೆಯಾಗಿದ್ದವು. ಹೊಸ […]