ಮುಂಬೈ: ಅಜಂತಾ-ಎಲ್ಲೋರಾ ಚಲನಚಿತ್ರೋತ್ಸವದಲ್ಲಿ ಹಿರಿಯ ಗೀತರಚನೆಕಾರ-ಚಿತ್ರಕಥೆಗಾರ ಜಾವೇದ್ ಅಖ್ತರ್ ಗೆ ʻಪದ್ಮಪಾಣಿ ಜೀವಮಾನ ಸಾಧನೆ ಪ್ರಶಸ್ತಿʼ ನೀಡಿ ಗೌರವಿಸಲಾಗುವುದು ಎಂದು ತಿಳಿದುಬಂದಿದೆ. ಹಿಂದಿ ಚಿತ್ರರಂಗದ ಕ್ಲಾಸಿಕ್‌ಗಳಾದ “ಜಂಜೀರ್”, “ದೀವಾರ್”, “ಶೋಲೆ”, “ಡಾನ್”, “ಕಾಲಾ ಪತ್ತರ್” ಮತ್ತು “ಮಿಸ್ಟರ್ ಇಂಡಿಯಾ” ಗಳ ಸಹ-ಲೇಖಕ ರಾದ ಅಖ್ತರ್ ಅವರನ್ನು ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಲಾಗುವುದು. ಜನವರಿ 3, 2024 ರಂದು ಛತ್ರಪತಿ ಸಂಭಾಜಿನಗರದ ಎಂಜಿಎಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ರುಕ್ಮಿಣಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಜಂತಾ-ಎಲ್ಲೋರಾ ಚಲನಚಿತ್ರೋತ್ಸವದ […]