ಲಂಡನ್: ಏಳು ಬಾರಿ ಫಾರ್ಮುಲಾ-1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ಗೆ ನೈಟ್‌ಹುಡ್ ಪ್ರಶಸ್ತಿ ಲಭಿಸಿದೆ. ಯುನೈಟೆಡ್ ಕಿಂಗ್ಡಮ್‌ನ ಹೊಸವರ್ಷದ ಗೌರವ ಪಟ್ಟಿಯಲ್ಲಿ ಹ್ಯಾಮಿಲ್ಟನ್ ಹೆಸರಿಸಲಾಗಿದೆ. 35ರ ಹರೆಯದ ಲೂಯಿಸ್ ಹ್ಯಾಮಿಲ್ಟನ್ ಅವರು ಈ ವರ್ಷ ಅತೀ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಎಫ್-1 ಡ್ರೈವರ್ ಆಗಿ ಗುರುತಿಸಿಕೊಂಡಿದ್ದರು. ಅವರು ಫೆರಾರಿ ಶ್ರೇಷ್ಠ ಡ್ರೈವರ್, ಮೈಕೆಲ್ ಷೂಮೇಕರ್ ಅವರ 7 ಪ್ರಶಸ್ತಿಗಳ ದಾಖಲೆಯನ್ನು ಸರಿದೂಗಿಸಿಕೊಂಡಿದ್ದರು. ಫಾರ್ಮುಲಾ-1ನಲ್ಲಿ ಇರುವ ಕರಿಯ ಯಶಸ್ವಿ ಚಾಲಕರಲ್ಲಿ ಹ್ಯಾಮಿಲ್ಟನ್ ಮೊದಲಿಗರು. ಫಾರ್ಮುಲಾ-1ನಲ್ಲಿ ಜನಪ್ರಿಯರಾಗಿದ್ದ ಹ್ಯಾಮಿಲ್ಟನ್ ಜನಾಂಗೀಯ ಅನ್ಯಾಯದ […]