ಭೋಪಾಲ್: ದೇವಾಲಯಗಳಿಗೂ ತುಂಡುಡುಗೆ ಧರಿಸಿ ಬರುವ ಭಕ್ತರ ಸಂಖ್ಯೆ ಜಾಸ್ತಿಯಾಗಿರುವ ಕಾರಣ ಭಾರತದ ಹಲವು ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ. ಮಧ್ಯಪ್ರದೇಶದ ರತ್ಲಾಮ್‌ನ ಕಾಳಿಕಾ ದೇವಾಲಯವು ಕೂಡ ವಸ್ತ್ರಸಂಹಿತೆ ಜಾರಿಗೊಳಿಸಿದ್ದು, ಭಕ್ತಾದಿಗಳು ವಿದೇಶಿ ಹಾಗೂ ತುಂಡುಡುಗೆ ಧರಿಸಿ ಬರುವಂತಿಲ್ಲ ಎಂದು ಆದೇಶಿಸಿದೆ. ದೇವಾಲಯದ ಅರ್ಚಕ ರಾಜೇಂದ್ರ ಶರ್ಮಾ ಅವರು ವಸ್ತ್ರಸಂಹಿತೆ ಜಾರಿಗೊಳಿಸಿದ್ದಾರೆ. “ದೇವಾಲಯದ ಪಾವಿತ್ರ್ಯ ಕಾಪಾಡಲು, ಭಕ್ತರು ವಿದೇಶಿ ಹಾಗೂ ತುಂಡುಡುಗೆ, ಶಾರ್ಟ್ಸ್‌ಗಳನ್ನು ಧರಿಸಿ ಬಂದರೆ, ಅವರಿಗೆ ದೇವಾಲಯ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ದೇವಾಲಯದ ಗರ್ಭಗುಡಿ ಪ್ರವೇಶಿಸಲು […]