ಹರಪನಹಳ್ಳಿ: ರಾತ್ರಿ ಸಂಚರಿಸುವ ಹರಪನಹಳ್ಳಿ ಟೂ ಗುಲ್ಬರ್ಗ ನಾನ್ ಎಸಿ ಸ್ಲೀಪರ್ ಕೋಚ್ ಬಸ್‌ಗೆ ಸ್ಥಳೀಯ ಶಾಸಕ ಜಿ.ಕರುಣಾಕರರೆಡ್ಡಿ ಅವರು ಬುಧವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಹಸಿರಿ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಸದರಿ ಬಸ್ ರಾತ್ರಿ ೮.೩೦ಕ್ಕೆ ಸರಿಯಾಗಿ ಹರಪನಹಳ್ಳಿಯಿಂದ ಕೊಟ್ಟೂರು, ಕೂಡ್ಲಿಗಿ ಹೊಸಪೇಟೆ ಮಾರ್ಗವಾಗಿ ಗುಲ್ಬರ್ಗ ಬೆಳಿಗ್ಗೆ ೬.೩೦ಕ್ಕೆ ತಲುಪುವುದು. ಗುಲ್ಬರ್ಗದಿಂದ ರಾತ್ರಿ ೧೦:೧೫ ಕ್ಕೆ ಬಿಟ್ಟು ಅದೇ ಮಾರ್ಗವಾಗಿ ಬೆಳಿಗ್ಗೆ ೭.೩೦ಕ್ಕೆ ಹರಪನಹಳ್ಳಿ ತಲುಪುವುದು. ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ್ […]