ನವದೆಹಲಿ: ನೌಕರರು ತಮ್ಮ ಮ್ಯಾನೇಜರ್‌ಗಳ ಅನುಮತಿ ಪಡೆದು ಕಂಪನಿಯ ಕೆಲಸದ ಜೊತೆಯಲ್ಲೇ ಸಣ್ಣ-ಪುಟ್ಟ ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು. ಆದರೆ ಕಂಪನಿಯ ಕೆಲಸದ ಜೊತೆ ಸ್ಪರ್ಧೆಗೆ ಇಳಿಯುವಂತಿರಬಾರದು, ಹಿತಾಸಕ್ತಿಯ ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು ಎಂದು ಇನ್ಫೋಸಿಸ್ ಸ್ಪಷ್ಟಪಡಿಸಿದೆ. ನೌಕರರು ಕೆಲಸ ತೊರೆಯುವುದನ್ನು ಕಡಿಮೆ ಮಾಡಲು ಈ ನಡೆಯು ಕಂಪನಿಗೆ ಒಂದಿಷ್ಟು ನೆರವಾಗಬಹುದು ಎಂದು ಅಂದಾಜಿಸಲಾಗಿದೆ. ಮೂನ್‌ಲೈಟಿಂಗ್‌ಗೆ ಅವಕಾಶ ಇಲ್ಲ ಎಂದು ಇನ್ಫೊಸಿಸ್ ಈಚೆಗೆ ಸ್ಪಷ್ಟಪಡಿಸಿತ್ತು. ಕಂಪನಿಯ ಒಳಗೆ ಕೂಡ ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಇನ್ಫೊಸಿಸ್ ಹೇಳಿದೆ.