ಬೆಂಗಳೂರು: ರವಿಚಂದ್ರನ್ ನಟನೆಯ ನೀಲಕಂಠ ಸಿನಿಮಾದಲ್ಲಿ ನಟಿಸಿರುವ ಬಹುಭಾಷಾ ನಟಿ ನಮಿತಾ ಕೃಷ್ಣ ಜನ್ಮಾಷ್ಟಮಿ ದಿನದಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಮಿತಾ ಈ ವಿಷಯವನ್ನು ಸೋಷಿಯಲ್ ಮೀಡಿಯಾದ ಮೂಲಕ ತಿಳಿಸಿದ್ದಾರೆ. ಪತಿ ಹಾಗೂ ಮಕ್ಕಳ ಜೊತೆಗಿರುವ ಫೋಟೋ ಹಂಚಿಕೊಂಡ ನಟಿ ನಮಿತಾ ಮನೆಗೆ ಹೊಸ ಅತಿಥಿಗಳ ಆಗಮನದ ಕುರಿತು ಖುಷಿ ಹಂಚಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಮಿತಾ ಚೆನ್ನೈ ಮೂಲದ ವೀರೇಂದ್ರ ಚೌಧರಿ ಅವರ ಜೊತೆ ಹಸೆಮಣೆ ಏರಿದ್ದರು. ಬೇಬಿ ಬಂಪ್ ಫೋಟೋಗಳನ್ನು ಇತ್ತೀಚೆಗಷ್ಟೇ ಅಭಿಮಾನಿಗಳಿಗಾಗಿ ಹಂಚಿ […]