Saturday, 20th April 2024

ಟ್ರಕ್ ಅಪಘಾತದಲ್ಲಿ ಒಂದೇ ಕುಟುಂಬದ ಮೂರು ಸದಸ್ಯರ ಸಾವು

ನವದೆಹಲಿ: ನೈರುತ್ಯ ದೆಹಲಿಯ ನಜಾಫ್‌ಗಢದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಟ್ರಕ್ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಸೇರಿದಂತೆ ನಾಲ್ವರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದ್ದು, ವಾಹನವನ್ನು ಸೀಜ್ ಮಾಡಲಾಗಿದೆ ಎಂದು ಅವರು ಹೇಳಿದರು. ಮೃತರಲ್ಲಿ ದಂಪತಿ ಮತ್ತು ಅವರ ಐದು ವರ್ಷದ ಮಗು ಸೇರಿದ್ದಾರೆ. ನಾಲ್ಕನೇ ವ್ಯಕ್ತಿ ಅವರ ನೆರೆಯವನು. ಅಪಘಾತದಲ್ಲಿ ದಂಪತಿಯ ಎರಡೂವರೆ ವರ್ಷದ ಮಗು ಗಾಯಗೊಂಡಿದೆ. ಗಾಯಗೊಂಡ ಮಗು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ತಿಳಿಸಿದ್ದಾರೆ. […]

ಮುಂದೆ ಓದಿ

error: Content is protected !!