ಬೆಂಗಳೂರು: ಸಿರಿಧಾನ್ಯ ಭವಿಷ್ಯದ ಆರೋಗ್ಯಪೂರ್ಣ ಆಹಾರವಾಗಿದ್ದು, ಸಿರಿಧಾನ್ಯಗಳ ಮಹತ್ವದ ಬಗ್ಗೆ ವಿದ್ಯಾರ್ಥಿ ಸಮುದಾಯಕ್ಕೆ ಈಗಿನಿಂದಲೇ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ ಹೇಳಿದ್ದಾರೆ. ನಗರದ ಕ್ರೈಸ್ಟ್ ವಿವಿ ಆವರಣದಲ್ಲಿ ಕೃಷಿ ಸಚಿವಾಲಯ ಮತ್ತು ಕ್ರೈಸ್ಟ್ ಕಾಲೇಜಿನ ಪೀಸ್ ಪ್ರಾಕ್ಸಿಸ್ ಅಂಡ್ ಡಿಪಾರ್ಟ್ ಮೆಂಟ್ ಆಫ್ ಮೀಡಿಯಾ ಸ್ಟಡೀಸ್ ಸಹಯೋಗದಲ್ಲಿ “ಮಿಲೆಟ್ ತಿಂತೀರಾ – ಸಿರಿಧಾನ್ಯ ಸಂಸ್ಕೃತಿ ಉತ್ತೇಜಿಸೋಣ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ವಿಭಿನ್ನ ಆಹಾರ ಸಂಸ್ಕೃತಿ ಹೊಂದಿರುವ ಕ್ರೈಸ್ಟ್ ನಂತಹ ಶಿಕ್ಷಣ […]