ನವದೆಹಲಿ: ದೇಶದಲ್ಲಿ ಔಷಧ ತಯಾರಿಕೆ(MedicineManufacturing), ಆಮದು (Import) ಮತ್ತು ಮಾರಾಟ(Sale) ನಿಯಂತ್ರಿಸಲು ಕೇಂದ್ರ ಸರ್ಕಾರ (Union Government) ಹೊಸ ಔಷಧ ಮಸೂದೆಯನ್ನ ತರಲು ಮುಂದಾಗಿದೆ. ಭಾರತದಲ್ಲಿ ತಯಾರಿಸಲಾದ ಕೆಮ್ಮು ಔಷಧಿಯಿಂದಾಗಿ ಕಳೆದ ವರ್ಷ ಗ್ಯಾಂಬಿಯಾ (Gambia) ಮತ್ತು ಉಜ್ಬೇಕಿಸ್ತಾನ್ (Ujbekistan)ನಲ್ಲಿ ಅನೇಕ ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಔಷಧಗಳ ಗುಣಮಟ್ಟ ಮತ್ತು ಸುರಕ್ಷತೆಯ ವಿಷಯದಲ್ಲಿ ಅತ್ಯುನ್ನತ ಮಾನದಂಡ ಗಳನ್ನ ಪೂರೈಸುವುದನ್ನ ಖಚಿತಪಡಿಸಿ ಕೊಳ್ಳಲು ಮಸೂದೆ ರಚಿಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. […]