ನವದೆಹಲಿ: ಲಕ್ನೋದಲ್ಲಿನ ಸುದ್ದಿ ವಾಹಿನಿಯಿಂದ ಇತ್ತೀಚೆಗೆ ರಾಜೀನಾಮೆ ನೀಡಿರುವ ಅನಿಲ್ ಯಾದವ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವೀಡಿಯೋವೊಂದರಲ್ಲಿ ಹಲವು ಮಾಹಿತಿಗಳನ್ನು ಹೊರಗೆಡಹಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಸರಕಾರಗಳು ಅಥವಾ ಯಾವುದೇ ಬಿಜೆಪಿ ನಾಯಕನ ವಿರುದ್ಧ ಟೀಕಾತ್ಮಕ ಪದಗಳನ್ನು ವರದಿಗಾರರು ಪ್ರಯೋಗಿಸಬಾರದು ಎಂಬ ಸೂಚನೆಗಳನ್ನು ಸುದ್ದಿ ವಾಹಿನಿ ಪಡೆದಿದೆ ಎಂದು ಆರೋಪಿಸಿದ್ದಾರೆ. ‘ನ್ಯೂಸ್ ನೇಷನ್’ ಸೇವೆಗೆ 2012ರಲ್ಲಿ ಸೇರಿದ್ದ ಹಾಗೂ ಇತ್ತೀಚೆಗೆ ರಾಜೀನಾಮೆ ನೀಡಿರುವ ಅನಿಲ್ ಯಾದವ್ […]