ಮೈಸೂರು: ಹೊಸ ವರ್ಷಾಚರಣೆಯ ನೆಪದಲ್ಲಿ ಡಿ.31ರ ರಾತ್ರಿ ಅಸಭ್ಯವಾಗಿ ವರ್ತಿಸುವುದು, ಕುಡಿದು ಹುಚ್ಚಾಟವಾಡುವುದು ಸೇರಿದಂತೆ ಕಾನೂನು ಉಲ್ಲಂಘನೆಯ ಚಟುವಟಿಕೆ ನಡೆಸುವವರನ್ನು ಹೆಡೆಮುರಿ ಕಟ್ಟಲು ಮೈಸೂರಿನಲ್ಲಿ ಚಾಮುಂಡಿ ಪಡೆ (ಸುರಕ್ಷತಾ ಪಿಂಕ್ ಗರುಡಾ) ತಯಾರಾಗಿದೆ. ಹೊಸ ವರ್ಷಾಚರಣೆ ಸಲುವಾಗಿ ಜನ ಮನೆಯಿಂದ ಹೊರಬಂದು ತಮಗೆ ಇಷ್ಟವಾದ ಸ್ಥಳಗಳಲ್ಲಿ ಪಾರ್ಟಿಗಳನ್ನು ಮಾಡುವುದರಿಂದ ನಗರದಾದ್ಯಂತ ಜನ ಸಂದಣಿಯಿರುತ್ತದೆ. ಹೋಟೆಲ್, ರೆಸಾರ್ಟ್ಗಳಲ್ಲಿ ವರ್ಷಾಚರಣೆಯ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತದೆ. ರಾತ್ರಿಯಿಡೀ ಕೆಲವರು ನಗರದಲ್ಲಿ ಅಡ್ಡಾಡುವ ಮೂಲಕ ಹೊಸ ವರ್ಷದ ಶುಭಾಶಯ ವಿನಿಮಯ ಮಾಡುವುದು ನಡೆಯುತ್ತದೆ. […]