ಕೋಲಂಬೋ : ಶ್ರೀಲಂಕಾದ ರಾಷ್ಟ್ರೀಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೊಲಂಬೊದ ಹಲವು ಭಾಗಗಳಲ್ಲಿ 10 ಗಂಟೆಗಳ ಕಾಲ ನೀರಿನ ಸರಬರಾಜನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ನೀರಿನ ಕಡಿತ ರಾತ್ರಿ 10.00 ರಿಂದ ಭಾನುವಾರ ಬೆಳಿಗ್ಗೆ 8ರವರೆಗೆ ನೀರಿನ ಸರಬರಾಜು ಸ್ಥಗಿತಗೊಳ್ಳಲಿದೆ. ನಗರದ ಎರಡು ಪ್ರದೇಶಗಳಲ್ಲಿ ನೀರು ಸರಬರಾಜು ಸಂಪೂರ್ಣ ಬಂದ್ ಆಗಲಿದ್ದು, ಎರಡು ಪ್ರದೇಶಗಳಲ್ಲಿ ಕಡಿಮೆ ಒತ್ತಡದ ನೀರು ಪೂರೈಕೆಯಾಗಲಿದೆ ಎಂದು ಮಂಡಳಿ ತಿಳಿಸಿದೆ. ಪ್ರಸ್ತುತ ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿದ್ದು, […]