ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಆನ್‌ಲೈನ್ ಗೇಮ್ ಪಾಸ್‌ವರ್ಡ್ ಕೊಡಲಿಲ್ಲ ಎಂದು ಒಂದಷ್ಟು ಯುವಕರು ತಮ್ಮ ಗೆಳೆಯನನ್ನೇ ಹತ್ಯೆ ಮಾಡಿದ್ದಾರೆ. ಆನ್‌ಲೈನ್ ಮೊಬೈಲ್ ಗೇಮ್ ಪಾಸ್‌ವರ್ಡ್ ಕೊಡದ ಕಾರಣಕ್ಕೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಪಪಾಯ್ ದಾಸ್ (18) ಎಂಬ ಯುವಕನು ಹತ್ಯೆ ಗೀಡಾಗಿದ್ದಾನೆ. ಈತನ ಗೆಳೆಯರೇ ಕೊಂದು, ದೇಹವನ್ನು ಸುಟ್ಟು, ಬಳಿಕ ಶವವನ್ನು ಕಾಡಿನಲ್ಲಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ. ಮುರ್ಷಿದಾಬಾದ್ ಜಿಲ್ಲೆಯ ಕಾಡಿನಲ್ಲಿ ಪಪಾಯ್ ದಾಸ್ ಶವ ಪತ್ತೆಯಾಗಿದೆ. ಮನೆಯಿಂದ ಹೊರಗೆ ಹೋದ ಮಗ ವಾಪಸ್ ಬರದ ಕಾರಣ ಆತನ […]