ಇಸ್ಲಾಮಾಬಾದ್: ಇಸ್ಲಾಮಾಬಾದ್ ಮಹಾನಗರ ಪಾಲಿಕೆಯಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸ ‘ಯೋಗ’ ತರಗತಿ ಆರಂಭವಾಗಿದೆ. ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಉಸ್ತುವಾರಿ ಹೊಣೆ ಹೊತ್ತಿರುವ ರಾಜಧಾನಿ ಅಭಿವೃದ್ಧಿ ಮಂಡಳಿಯು (ಸಿಡಿಎ) ತನ್ನ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ, ‘ಇಸ್ಲಾಮಾಬಾದ್ ಮಹಾನಗರ ಪಾಲಿಕೆಯು ಎಫ್-9 ಪಾರ್ಕ್ನಲ್ಲಿ ಉಚಿತ ಯೋಗ ತರಗತಿ ಆರಂಭಿಸಿದ್ದು, ಹಲವರು ಈಗಾಗಲೇ ತರಗತಿಗೆ ಸೇರ್ಪಡೆಯಾಗಿದ್ದಾರೆ ಎಂದು ಸಿಡಿಎ ತಿಳಿಸಿದೆ. ವಿಶ್ವಸಂಸ್ಥೆಯು 2014 ಡಿಸೆಂಬರ್ 11ರಂದು ಭಾರತ ಮೂಲದ ಯೋಗಕ್ಕೆ ಜಾಗತಿಕ ಮನ್ನಣೆ ನೀಡಿ ಜೂನ್ 21 ಅನ್ನು […]