ಮುಂಬೈ : ಕಳೆದ ಆರು ತಿಂಗಳಿನಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಂಗೀತಗಾರ ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ(84) ಅವರು ವಿಧಿವಶರಾಗಿದ್ದಾರೆ. ಶಿವಕುಮಾರ್ ಶರ್ಮಾ ಅವರು ಸಂಗೀತ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಜಮ್ಮುವಿನಲ್ಲಿ ಜನಿಸಿದ ಶರ್ಮಾ ಅವರು ತಮ್ಮ ಹದಿಮೂ ರನೇ ವಯಸ್ಸಿನಲ್ಲಿಯೇ ಸಂತೂರ್ ನುಡಿಸುವುದನ್ನು ಕಲಿಯಲು ಪ್ರಾರಂಭಿಸಿ ದರು. 1955ರಲ್ಲಿ ಮೊದಲ ಬಾರಿಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಸಂತೂರ್ ಪ್ರದರ್ಶನ ನೀಡುವ ಮೂಲಕ ಸಂತೂರ್‌ನನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.