ಮೊಹಾಲಿ: ಸತತ ಪಂದ್ಯಗಳನ್ನು ಸೋತಿರುವ ಪಂಜಾಬ್ ಕಿಂಗ್ಸ್ ಗೆ ಮತ್ತೊಂದು ಹೊಡೆತ ಬಿದ್ದಿದೆ. ನಾಯಕ ಶಿಖರ್ ಧವನ್ ಅವರು ಮುಂದಿನ ಕೆಲವು ದಿನಗಳ ಕಾಲ ಆಡುವುದಿಲ್ಲ ಎಂದು ವರದಿಯಾಗಿದೆ. ಭುಜದ ನೋವಿನಿಂದ ಬಳಲುತ್ತಿರುವ ಎಡಗೈ ಬ್ಯಾಟರ್ ಧವನ್ ಅವರು ಶನಿವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಧವನ್ ಬದಲಿಗೆ ಸ್ಯಾಮ್ ಕರ್ರನ್ ಅವರು ನಾಯಕತ್ವ ವಹಿಸಿದ್ದರು. ತಂಡದ ನಿರ್ದೇಶಕ ಸಂಜಯ್ ಬಂಗಾರ್ ಮಾತನಾಡಿದ್ದು, “ಧವನ್ ಅವರು ಭುಜದ ಗಾಯದಿಂದ ಬಳಲುತ್ತಿದ್ದಾರೆ, ಆದ್ದರಿಂದ ಅವರು ಕನಿಷ್ಠ […]