ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಆಗಿದ್ದ ಪೀಟರ್ ನೆವಿಲ್ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ಪದೇ ಪದೇ ಗಾಯದಿಂದ ಬಳಲುತ್ತಿರುವ ಪೀಟರ್ ತನ್ನ ಕ್ರಿಕೆಟ್ ವೃತ್ತಿ ಜೀವನ ವನ್ನು ಅಂತಿಮಗೊಳಿಸಲು ನಿರ್ಧರಿಸಿದ್ದಾರೆ. ನ್ಯೂ ಸೌತ್ ವೇಲ್ಸ್ ಪರವಾಗಿ ಆಡುತ್ತಿದ್ದ ಪೀಟರ್ ನೆವಿಲ್ ಭುಜದ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಕಳೆದ ಫೆಬ್ರವರಿಯಿಂದ ಆಡಲು ಸಾಧ್ಯವಾಗಿರಲಿಲ್ಲ. ನನ್ನ ವೃತ್ತಿಜೀವನದ ಉಳಿದ ಭಾಗಗಳಿಗಿಂತ ಗಾಯದ ಕಾರಣದಿಂದ ಈ ಋತುವಿನಲ್ಲಿ ನಾನು ಹೆಚ್ಚಿನ ಪಂದ್ಯಗಳನ್ನು ಕಳೆದು ಕೊಂಡಿದ್ದೇನೆ. ನಾನು ಆಸ್ಟ್ರೇಲಿಯಾಕ್ಕಾಗಿ ಆಡಿದ್ದೇನೆಂದು […]