ಗೋದಾವರಿ: ಆಂಧ್ರಪ್ರದೇಶದಲ್ಲಿ ತೆಲುಗಿನಲ್ಲಿ ಇಲಿಸ್ ಮೀನನ್ನು ಪುಲಸ ಎಂದು ಕರೆಯುತ್ತಾರೆ. ಇತ್ತೀಚೆಗೆ ಗೋದಾವರಿಯ ಕುಟುಂಬವೊಂದಕ್ಕೆ 2 ಕಿಲೋ ತೂಕದ ಪುಲಸ ಮೀನು ಸಿಕ್ಕಿದ್ದು , ಇದು ಹರಾಜಿನಲ್ಲಿ ಬರೋಬ್ಬರಿ 13,000 ರುಪಾಯಿಗೆ ಮಾರಾಟವಾಗಿ ಹೊಸ ದಾಖಲೆ ಬರೆದಿದೆ . ಗೋದಾವರಿ ನದಿಯಲ್ಲಿ ಪ್ರವಾಹ ಉಕ್ಕೇರಿ ಕೆಂಪು ನೀರು ಪ್ರವಹಿಸಿದಾಗ ಜನರಿಗೆ ಪುಲಸದ ನಿರೀಕ್ಷೆ ಶುರು ವಾಗುತ್ತದೆ. ಜುಲೈನಿಂದ ಸೆಪ್ಟಂಬರ್ ಅವಧಿಯಲ್ಲಿ ಗೋದಾವರಿ ನದಿ ಪ್ರವಾಹ ಎರಗಿದಾಗ ನೀರು ವಿವಿಧ ಖನಿಜಗಳ ಕಾರಣಕ್ಕೆ ಕೆಂಪಾಗಿರುತ್ತದೆ. ಆಂಧ್ರದಲ್ಲಿ ಪುಲಸ ಮೀನು […]