ಲಂಡನ್: ಪತ್ರಿಕೋದ್ಯಮ ದೈತ್ಯ ರುಪೆಕ್ ಮುರ್ಡೊಕ್ ಹಾಗೂ ನಟಿ ಜೆರ್ರಿ ಹಾಲ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ. 2016ರ ಮಾರ್ಚ್ ನಲ್ಲಿ ನಟಿ ಜೆರ್ರಿ ಹಾಲ್ ಅವರನ್ನು ಮುರ್ಡೊಕ್ ಸೆಂಟ್ರಲ್ ಲಂಡನ್ ನಲ್ಲಿ ಸರಳವಾಗಿ ವಿವಾಹವಾಗಿದ್ದರು. ಕಳೆದ ವರ್ಷ 90ನೇ ಹುಟ್ಟುಹಬ್ಬದ ವೇಳೆ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಹರಡಿತ್ತು. ಆದರೆ ವರ್ಷದ ನಂತರ ಇಬ್ಬರು ಬೇರ್ಪಡಲು ನಿರ್ಧರಿಸಿದ್ದು, 6 ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ.