ಮುಂಬೈ: ಲೋಕಸಭಾ ಚುನಾವಣೆಯಲ್ಲಿ ನಿತಿನ್ ಗಡ್ಕರಿ ಅವರ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಾರಣ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ. ಕೇಂದ್ರ ಸಚಿವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದಾಗ ನಾಗ್ಪುರ ಲೋಕಸಭಾ ಸ್ಥಾನದಿಂದ ಸ್ಪರ್ಧಿಸಿದ್ದ ಗಡ್ಕರಿ ಅವರ ಪರವಾಗಿ ಫಡ್ನವೀಸ್ ಇಷ್ಟವಿಲ್ಲದೆ ಪ್ರಚಾರ ಮಾಡಿದ್ದರು ಎಂದು ರಾವತ್ ಆರೋಪಿಸಿದ್ದಾರೆ. ನಾಗ್ಪುರ ಇಬ್ಬರೂ ಬಿಜೆಪಿ ನಾಯಕರ ತವರೂರು ಆಗಿದೆ. ಗಡ್ಕರಿ ಅವರನ್ನು […]